I
 



ಸಂಕಲ್ಪದಿಂದ ಸಿದ್ಧಿ: ನವ ಭಾರತ ಮಂಥನ ಕಾರ್ಯಕ್ರಮ ದಿನಾಂಕ 29.08.2017

ದಿನಾಂಕ 29.08.2017 ರಂದು ಐ.ಸಿ.ಎ.ಆರ್. ಕೃಷಿ ವಿಜ್ಞಾನ ಕೇಂದ್ರ, ಉತ್ತರ ಕನ್ನಡ ಶಿರಸಿ ವತಿಯಿಂದ ಸಂಕಲ್ಪದಿಂದ ಸಿದ್ಧಿ: ನವ ಭಾರತ ಮಂಥನ ಕಾರ್ಯಕ್ರಮವನ್ನು ಅರಣ್ಯ ಮಹಾವಿದ್ಯಾಲಯ, ಶಿರಸಿಯ ಪ್ರೇಕ್ಷಾಗೃಹದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಶ್ರೀ. ಅನಂತ ಕುಮಾರ ಹೆಗಡೆ, ಮಾನ್ಯ ಸಂಸದರು, ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಇವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. 2022ರೊಳಗಾಗಿ ಭಾರತವನ್ನು ಎಲ್ಲ ದೃಷ್ಠಿಗಳಿಂದಲೂ ಒಂದು ಸದೃಢ ದೇಶವಾಗಿಸಲು ಪ್ರತಿಯೊಬ್ಬ ಭಾರತೀಯನು ಪಣತೊಟ್ಟಲ್ಲಿ ಮಾತ್ರ ಈ ಕನಸು ನನಸಾಗಲು ಸಾಧ್ಯ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಮಹತ್ವಾಕಾಂಕ್ಷಿ ಯೋಜನೆಗಳನ್ನು ಹಾಕಿಕೊಂಡಿದೆ. ಅದರಲ್ಲೂ ಪ್ರಮುಖವಾಗಿ 2022ರೊಳಗಾಗಿ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಸರಕಾರ ಹಮ್ಮಿಕೊಂಡ ಯೋಜನೆಗಳ ಕುರಿತು ಮಾಹಿತಿ ನೀಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ 147 ಜನ ರೈತರು, ಇಲಾಖಾ ಅಧಿಕಾರಿಗಳು ಪಾಲ್ಗೊಂಡಿದ್ದರು. ಡಾ.ವಿ.ಐ. ಬೆಣಗಿ, ವಿಸ್ತರಣಾ ನಿರ್ದೇಶಕರು, ಕೃಷಿ ವಿಶ್ವ ವಿದ್ಯಾಲಯ ಇವರು ಅದ್ಯಕ್ಷತೆ ವಹಿಸಿದ್ದರು. ಡಾ. ಹೆಚ್. ಬಸಪ್ಪ, ಡೀನ್ ಅರಣ್ಯ ಮಹಾವಿದ್ಯಾಲಯ ಶಿರಸಿ, ಶ್ರೀ. ನಟರಾಜ ಟಿ. ಎಮ್. ಉಪ ಕೃಷಿ ನಿರರ್ದೇಶಕರು, ಶಿರಸಿ, ಡಾ. ರಾಜೇಂದ್ರ ಹೆಗಡೆ, ಮುಖ್ಯಸ್ಥರು, ಪ್ರಧಾನ ವಿಜ್ಞಾನಿಗಳು ಹಾಗೂ ಮುಖ್ಯಸ್ಥರು, ರಾಷ್ಟ್ರೀಯ ಭೂ ಸರ್ವೇಕ್ಷಣಾ ಹಾಗೂ ಭೂ ಬಳಕೆ ಯೋಜನಾ ಸಂಸ್ಥೆ, ಬೆಂಗಳೂರು, ಡಾ. ತಿಮ್ಮಪ್ಪ, ಪ್ರಧಾನ ವಿಜ್ಞಾನಿಗಳು, ಅಟಾರಿ ವಲಯ-11, ಬೆಂಗಳೂರು ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಡಾ. ಹೆಚ್. ಬಸಪ್ಪ, ಡೀನ್ ಅರಣ್ಯ ಮಹಾವಿದ್ಯಾಲಯ ಶಿರಸಿ ಇವರು ನವ ಭಾರತ ಮಂಥನ ದ ಪ್ರತಿಜ್ಞಾ ವಿಧಿಯನ್ನು ನೆರವೇರಿಸಿಕೊಟ್ಟರು.

ಮಾನ್ಯ ಸಂಸದರಾದ ಶ್ರೀ ಅನಂತ ಕುಮಾರ ಹೆಗಡೆ, ತಮ್ಮ ಉದ್ಘಾಟನಾ ಭಾಷಣದಲ್ಲಿ ಸಂಕಲ್ಪ ದಿಂದ ಸಿದ್ಧಿ : ನವ ಭಾರತ ಮಂಥನದ ಕುರಿತು ಸವಿಸ್ತಾರವಾಗಿ ವಿವರಿಸಿದರು. 2022 ರೊಳಗಾಗಿ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಯೋಜಿಸಿದ 7 ಅಂಶಗಳಾದ ಉತ್ಪಾದನೆ ಹೆಚ್ಚಿಸುವುದು, ಪರಿಕರಗಳ ಪ್ರಭಾವಶಾಲಿ ಉಪಯೋಗ, ಕೊಯ್ಲೋತ್ತರ ನಷ್ಟವನ್ನು ಕಡಿಮೆಗೊಳಿಸುವುದು, ಗುಣಮಟ್ಟವನ್ನು ಹೆಚ್ಚಿಸುವುದು, ಮಾರುಕಟ್ಟೆಯ ನ್ಯೂನ್ಯತೆಗಳನ್ನು ಸರಿಪಡಿಸುವುದು, ಕೃಷಿ ಕ್ಷೇತ್ರದಲ್ಲಿ ನಷ್ಟ ಕಡಿಮೆಗೊಳಿಸುವುದು, ಕೃಷಿ ಪೂರಕ ಚಟುವಟಿಕೆಗಳನ್ನು ಉತ್ತೇಜಿಸುವ ಕುರಿತು ಮಾಹಿತಿ ನೀಡಿದರು. ಈ ನಿಟ್ಟಿನಲ್ಲಿ ಕೃಷಿ ವಿಶ್ವವಿದ್ಯಾಲಯಗಳು ಹಾಗೂ ಕೃಷಿ ವಿಜ್ಞಾನಿಗಳ ಪಾತ್ರ ಬಹು ಮುಖ್ಯ ಎಂದು ತಿಳಿಸಿದರು. ಲಭ್ಯವಿರು ಸೌಲಭ್ಯಗಳು ಹಾಗೂ ಅವುಗಳ ಮಹತ್ವದ ಕುರಿತು ರೈತರಿಗೆ ಮನವರಿಕೆ ಮಾಡುವಲ್ಲಿ ಇಲಾಖೆಗಳು ಹಾಗೂ ಕೃಷಿ ಸಂಘ ಸಂಸ್ಥೆಗಳು ಶ್ರಮಿಸಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಡಾ. ರಾಜೇಂದ್ರ ಹೆಗಡೆ ಇವರು ಕೃಷಿಯಲ್ಲಿ ಧನಾತ್ಮಕ ಪರಿಣಾಮಗಳಿಗೆ ಮಣ್ಣಿನ ಆರೋಗ್ಯ ಅತಿ ಪ್ರಮುಖವಾದುದು ಎಂದು ತಿಳಿಸುತ್ತಾ ರಾಷ್ಟ್ರೀಯ ಭೂ ಸರ್ವೇಕ್ಷಣಾ ಹಾಗೂ ಭೂ ಬಳಕೆ ಯೋಜನಾ ಸಂಸ್ಥೆಯಲ್ಲಿ ಲಭ್ಯವಿರುವ ಸೌಲಭ್ಯಗಳ ಮಾಹಿತಿ ನೀಡಿದರು.

ಕೇಂದ್ರದ ಮುಖ್ಯಸ್ಥರಾದ ಡಾ. ಮಂಜಪ್ಪ ಕೆ. ಇವರು ಸ್ವಾಗತ ಕೋರಿದರು ಹಾಗೂ ಡಾ. ರೂಪಾ ಎಸ್. ಪಾಟೀಲ ವಂದನಾರ್ಪಣೆ ನೆರವೇರಿಸಿಕೊಟ್ಟರು.